

17th June 2024

ನವದೆಹಲಿ: ಭಾರಿ ಪ್ರಮಾಣದ ಭೂಕುಸಿತಕ್ಕೆ ಒಳಗಾಗಿದ್ದ
ಪಪುವಾ ನ್ಯೂಗಿನಿಗೆ ಭಾರತದಿಂದ ನೆರವು ರವಾನಿಸಲಾಗಿದೆ. ವಿಮಾನದ ಮೂಲಕ 8.35 ಕೋಟಿ ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ.ತಾತ್ಕಾಲಿಕ ಆಶಯಕ್ಕೆ ಅಗತ್ಯವಾದ ವಸ್ತುಗಳು, ನೀರಿನ ಟ್ಯಾಂಕ್ಗಳು, ನೈರ್ಮಲ್ಯ ಕಿಟ್ಗಳು ಮತ್ತು ತಿನ್ನಲು ಸಿದ್ಧವಾಗಿರುವ ಊಟ ಸೇರಿದಂತೆ 13 ಟನ್ಗಳಷ್ಟು ವಿಪತ್ತು ಪರಿಹಾರ ಸಾಮಗ್ರಿ ಒಳಗೊಂಡಂತೆ ಸರಿಸುಮಾರು ಟನ್ಗಳಷ್ಟು 19 ಟನ್ಗಳಷ್ಟು ಸಾಮಗ್ರಿಗಳನ್ನು ಕಳುಹಿಸಲಾಗಿದೆ.
ಇದರೊಂದಿಗೆ 6 ಟನ್ ಗಳಷ್ಟು ತುರ್ತು ಬಳಕೆಯ ಔಷಧ. ಡೆಂಗ್ಯೂ ಮತ್ತು ಮಲೇರಿಯಾ ರೋಗನಿರ್ಣಯದ ಕಿಟ್ಗಳು ಸೇರಿದಂತೆ ವೈದ್ಯಕೀಯ ಉಪಕರಣಗಳು ಮತ್ತು ಮಗುವಿಗೆ ನೀಡುವ ಆಹಾರ ಪೂರೈಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕಳೆದ ಮಾರ್ಚ್ನಲ್ಲಿ ಪಪುವಾ ನ್ಯೂಗಿನಿಯಲ್ಲಿ ಭೂಕುಸಿತ ಭೂಕುಸಿತ ಸಂಭವಿಸಿ 2 ಸಾವಿರಕ್ಕೂ ಅಧಿಕ ಜನರು ಭೂ ಸಮಾಧಿಯಾಗಿದ್ದರು. ರಾಷ್ಟ್ರವು ಅಪಾರ ಪ್ರಮಾಣದ ಆರ್ಥಿಕ ನಷ್ಟಕ್ಕೆ ಒಳಗಾಗಿತ್ತು. ಹೀಗಾಗಿ ವಿಶ್ವಸಂಸ್ಥೆಯ ಮೂಲಕ
ಅಂತರರಾಷ್ಟ್ರೀಯ ನೆರವನ್ನು ಪಪುವಾ ಸರ್ಕಾರ ಕೋರಿತ್ತು. ಅದರ ಭಾಗವಾಗಿ ಭಾರತ ವಿಪತ್ತು ನೆರವನ್ನು ರವಾನಿಸಿದೆ.

ಪತ್ರಕರ್ತರಿಗೆ ಅಗೌರವ ತೋರಿದ ಮಾಜಿ ಶಾಸಕ ಡಿ.ಜಿ. ಪಾಟೀಲ ಹೇಳಿಕೆ ಖಂಡಿಸಿ ಬಹಿರಂಗ ಕ್ಷಮೆಗೆ ಆಗ್ರಹ

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶಿವಶರಣಪ್ಪಗೌಡ್ರ ಪಾಟೀಲ್ ನಿಧನ.